ಇನ್ನು ಸ್ವಲ್ಪ ವಿಶ್ರಾಂತಿಗಾಗಿ ಸರ್ಕಾರಿ ಅತಿಥಿ ಗೃಹಕ್ಕೆ ತೆರಳಿದ ಪ್ರಧಾನಿ ಮೋದಿ ನಂತರ ಕನ್ಯಾಕುಮಾರಿ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ.

ಅವರು ತಮಿಳು ಸಾಂಸ್ಕೃತಿಕ ಐಕಾನ್ ಸಂತ ತಿರುವಳ್ಳುವರ್ ಪ್ರತಿಮೆಯ ಮುಂದೆ ಗೌರವ ಸಲ್ಲಿಸಲಿದ್ದಾರೆ.

ಪ್ರಧಾನಿಯವರು ಈಗ ಕನ್ಯಾಕುಮಾರಿ ಭೂಭಾಗದಿಂದ ವಿವೇಕಾನಂದ ರಾಕ್ ಸ್ಮಾರಕಕ್ಕೆ ದೋಣಿಯಲ್ಲಿ ಹೋಗಲಿದ್ದಾರೆ.

ಮೇ 30ರಿಂದ ಜೂನ್ 1ರವರೆಗೆ ಮೂರು ದಿನಗಳ ಕಾಲ ವಿವೇಕಾನಂದ ರಾಕ್ ಸ್ಮಾರಕದಲ್ಲಿ ತಂಗಲಿದ್ದು, ರಾಕ್ ಸ್ಮಾರಕದ ಧ್ಯಾನ ಮಂದಿರದಲ್ಲಿ 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.

ಕನ್ಯಾಕುಮಾರಿಯಲ್ಲಿ ಪ್ರಧಾನಿಯವರ ಧ್ಯಾನ ಕಾರ್ಯಕ್ರಮದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಸಿಪಿಐ-ಎಂ ಹರಿಹಾಯ್ದಿದ್ದು, ಅವರಿಗೆ ಧ್ಯಾನ ಮಾಡಲು ಅವಕಾಶ ನೀಡದಂತೆ ಕಾಂಗ್ರೆಸ್ ಭಾರತ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಪ್ರಜಾಪ್ರತಿನಿಧಿ ಕಾಯ್ದೆಯಡಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣಾ ಆಯೋಗ ಪ್ರಧಾನಿ ಧ್ಯಾನ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಹೇಳಿದ್ದಾರೆ.