ಜೂನ್ 18 ರಂದು ರಾಜ್ಯದ ಅರಾರಿಯಾ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ.

ಮಹಾರಾಜಗಂಜ್ ಉಪವಿಭಾಗದ ಪಟೇಡಾ ಮತ್ತು ಕನೌಲಿ ಗ್ರಾಮಗಳನ್ನು ಸಂಪರ್ಕಿಸುವ 45 ವರ್ಷಗಳ ಹಿಂದೆ ನಿರ್ಮಿಸಲಾದ ಒಂದು ಪಿಲ್ಲರ್ ಸೇತುವೆಯು ಮುಂಜಾನೆ 5 ಗಂಟೆ ಸುಮಾರಿಗೆ ಕುಸಿದಿದೆ.

ಸಾರ್ವಜನಿಕರ ಕೊಡುಗೆಯಿಂದ ಸೇತುವೆ ನಿರ್ಮಾಣವಾಗಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸೇತುವೆ ಕುಸಿದಿದೆ ಎಂದು ಗ್ರಾಮಸ್ಥ ಮೊಹಮ್ಮದ್ ನಯಿಮ್ ಹೇಳಿದರು.

"ರಾಜ್ಯ ಸರ್ಕಾರವು ಸಂತ್ರಸ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಸುಮಾರು 20,000 ಜನರು ಇದರಿಂದ ತೊಂದರೆಗೀಡಾಗುತ್ತಾರೆ. ಆಘಾತಕಾರಿ ಸಂಗತಿಯೆಂದರೆ, ಸೇತುವೆಯನ್ನು ಪರಿಶೀಲಿಸಲು ಜಿಲ್ಲಾಡಳಿತದಿಂದ ಯಾರೂ ಇಲ್ಲಿಗೆ ಬಂದಿಲ್ಲ" ಎಂದು ಅವರು ಹೇಳಿದರು.