“ನಮ್ಮ ನಗರಗಳು ಮಾದಕ ದ್ರವ್ಯ ಮುಕ್ತವಾಗುವವರೆಗೆ ಬುಲ್ಡೋಜರ್ ಕಾರ್ಯಾಚರಣೆ ಮುಂದುವರಿಯುತ್ತದೆ. ರಾಜ್ಯದಲ್ಲಿ ಎಲ್ಲೆಲ್ಲಿ ಡ್ರಗ್ಸ್ ಮಾರಾಟವಾಗುತ್ತಿದ್ದರೂ ದಂಧೆಕೋರರನ್ನು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಡ್ರಗ್ಸ್ ಮಾರಾಟ ಮಾಡುವವರು, ಡ್ರಗ್ಸ್ ಇಟ್ಟುಕೊಳ್ಳುವವರು ಹಾಗೂ ಡ್ರಗ್ಸ್ ಮಾರಾಟ ಮಾಡುವ ಹೋಟೆಲ್ ಗಳು ಹಾಗೂ ಪುಣೆ ಮಾತ್ರವಲ್ಲದೆ ಇತರ ನಗರಗಳಲ್ಲೂ ಯುವ ಪೀಳಿಗೆಯ ಜೀವನ ಹಾಳು ಮಾಡಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಥಾಣೆ, ನಾಸಿಕ್ ಅಥವಾ ರಾಜ್ಯದ ಇತರ ಭಾಗಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದ್ದರೂ ಅವರನ್ನು (ಪೆಡ್ಲರ್‌ಗಳು) ಬಿಡಲಾಗುವುದಿಲ್ಲ. ಪೊಲೀಸ್ ಆಡಳಿತ, ಜಿಲ್ಲಾಧಿಕಾರಿಗಳು ಮತ್ತು ಮುನ್ಸಿಪಲ್ ಕಮಿಷನರ್‌ಗಳು ಡ್ರಗ್ ಕಾರ್ಟೆಲ್‌ಗಳನ್ನು ಬುಡಸಮೇತ ಕಿತ್ತೊಗೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಡ್ರಗ್ಸ್ ಸರಬರಾಜು ಮಾಡುವವರು ಯಾರೇ ಆಗಿರಲಿ, ಎಷ್ಟೇ ದೊಡ್ಡವರಾದರೂ ಬಿಡುವುದಿಲ್ಲ ಎಂದರು.

“ನಮ್ಮ ಯುವ ಪೀಳಿಗೆಯನ್ನು ಹಾಳುಮಾಡಲು ನಾವು ಬಿಡುವುದಿಲ್ಲ. ಈ ಬುಲ್ಡೋಜಿಂಗ್ ಕಾರ್ಯಾಚರಣೆ ಮುಂದುವರಿಯಲಿದೆ,'' ಎಂದು ಮುಖ್ಯಮಂತ್ರಿ ಹೇಳಿದರು.