ನೋಯ್ಡಾ (ಯುಪಿ), ಯುಎಸ್‌ನಲ್ಲಿ ವಾಸಿಸುವ ಜನರನ್ನು ವಂಚಿಸಿದ ನಕಲಿ ಕಾಲ್ ಸೆಂಟರ್ ಅನ್ನು ನೋಯ್ಡಾದಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ ಮತ್ತು ಆವರಣದಿಂದ 73 ಜನರನ್ನು ಬಂಧಿಸಿದ್ದಾರೆ.

ಸೆಕ್ಟರ್ 90ರಲ್ಲಿರುವ ಭೂತಾನ್ ಆಂಥೆಮ್ ಕಾಂಪ್ಲೆಕ್ಸ್‌ನಿಂದ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಹೃದಯೇಶ್ ಕಥೇರಿಯಾ ಹೇಳಿದ್ದಾರೆ.

33 ಮಹಿಳೆಯರು ಸೇರಿದಂತೆ 73 ಜನರನ್ನು ಪೊಲೀಸರು ಬಂಧಿಸಿದ್ದು, ಈ ಗ್ಯಾಂಗ್‌ನ ನಾಯಕ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಸ್ಥಳದಿಂದ 14 ಮೊಬೈಲ್ ಫೋನ್‌ಗಳು, 73 ಕಂಪ್ಯೂಟರ್‌ಗಳು, ಮೂರು ರೂಟರ್‌ಗಳು ಮತ್ತು 48,000 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಕಥೇರಿಯಾ ತಿಳಿಸಿದ್ದಾರೆ.

‘‘ತನಿಖೆಯ ವೇಳೆ ಈ ವ್ಯಕ್ತಿಗಳು ತಮ್ಮ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ವೈರಸ್ ಹಾಕುವ ಮೂಲಕ ಜನರನ್ನು ವಂಚಿಸುತ್ತಿದ್ದರು ಮತ್ತು ನಂತರ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ,’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.