ಕೊಚ್ಚಿ: ಇಲ್ಲಿನ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಗ್ಯಾಂಗ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ.

ವಿಮಾನ ನಿಲ್ದಾಣದ ಸಿಬ್ಬಂದಿ ಲಿನಿನ್ ಬೋನಿಯನ್ನು ಬಂಧಿಸಲಾಗಿದ್ದು, ಆತನಿಂದ ಪೇಸ್ಟ್ ರೂಪದಲ್ಲಿ ಸುಮಾರು 1,400 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 4 ರಂದು ಏರ್ ಅರೇಬಿಯಾ ವಿಮಾನದ ಮೂಲಕ ಅಬುಧಾಬಿಯಿಂದ ಕೊಚ್ಚಿಗೆ ಆಗಮಿಸಿದ ಬಾಲು ಎಂಬ ಪ್ರಯಾಣಿಕರು ವಲಸೆ ಪ್ರದೇಶದ ಶೌಚಾಲಯದಲ್ಲಿ ಹಳದಿ ಲೋಹವನ್ನು ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ ಎಂದು ಡಿಆರ್‌ಐ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

"1,349 ಗ್ರಾಂ 24 ಕ್ಯಾರೆಟ್ ಚಿನ್ನವು ಸಂಯುಕ್ತ ರೂಪದಲ್ಲಿ ಪತ್ತೆಯಾಗಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.