ರಿಷಿಕೇಶ್, ಕಾರ್ಬೆಟ್ ಹುಲಿ ಸಂರಕ್ಷಿತಾರಣ್ಯದಿಂದ ಸ್ಥಳಾಂತರಗೊಂಡಿದ್ದ ಹುಲಿಯ ನಾಲ್ಕು ಮರಿಗಳ ಪೈಕಿ ಎರಡನ್ನು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ (ಆರ್‌ಟಿಆರ್) ಬೆರಿವಾಡ ವ್ಯಾಪ್ತಿಯಲ್ಲಿ ಚಿರತೆಗಳು ಕೊಂದಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮರಿಗಳಲ್ಲಿ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು ಎಂದು ಆರ್‌ಟಿಆರ್ ನಿರ್ದೇಶಕ ಸಾಕೇತ್ ಬಡೋಲಾ ತಿಳಿಸಿದ್ದಾರೆ.

ಮರಿಗಳು ಸುಮಾರು ಒಂದರಿಂದ ಒಂದೂವರೆ ತಿಂಗಳ ವಯಸ್ಸಿನವು ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.

ಒಂದು ಮರಿಯ ಕುತ್ತಿಗೆ ಮುರಿದಿದ್ದು, ಮತ್ತೊಂದರ ತಲೆ ನುಜ್ಜುಗುಜ್ಜಾಗಿದೆ ಎಂದು ಬಡೋಲಾ ಹೇಳಿದರು.

ಸ್ಥಳಾಂತರಗೊಂಡ ಹುಲಿ ಮೇ 24 ರಂದು ಚಿಲ್ಲಾವಳಿ ವ್ಯಾಪ್ತಿಯಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ಈಗ ಈ ಹುಲಿಯ ಎರಡು ಮರಿಗಳು ಮಾತ್ರ ಜೀವಂತವಾಗಿವೆ.