ಹರಿದ್ವಾರ, ಹರಿದ್ವಾರದಲ್ಲಿ ಶನಿವಾರ ಮಧ್ಯಾಹ್ನ ಭಾರೀ ಮಳೆ ಸುರಿದಿದ್ದು, ಇಲ್ಲಿನ ಸುಖಿ ನದಿಯಲ್ಲಿ ಪ್ರವಾಹ ಉಂಟಾಗಿ ಹಲವಾರು ಕಾರುಗಳು ಕೊಚ್ಚಿ ಹೋಗಿವೆ.

ಮನೆಗಳಿಗೆ ಮಳೆ ನೀರು ನುಗ್ಗಿದ್ದು, ತೀರ್ಥಹಳ್ಳಿಯ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ.

ಮಳೆಯಾಶ್ರಿತ ಸುಖಿ ನದಿಯು ಸಾಮಾನ್ಯವಾಗಿ ಒಣಗಿರುವುದರಿಂದ, ಜನರು ತಮ್ಮ ಕಾರುಗಳನ್ನು ಒಣ ನದಿಯ ತಳದಲ್ಲಿ ನಿಲ್ಲಿಸುವುದು ವಾಡಿಕೆ.

ನದಿಯಲ್ಲಿ ಏಕಾಏಕಿ ನೀರು ಹರಿದಿದ್ದರಿಂದ ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನದಿಯು ಸ್ವಲ್ಪ ದೂರದಲ್ಲಿ ಗಂಗೆಯ ಮುಖ್ಯವಾಹಿನಿಗೆ ಸೇರುತ್ತದೆ.

ಮೊಬೈಲ್ ಕ್ಯಾಮೆರಾಗಳಲ್ಲಿ ತೇಲುವ ಕಾರುಗಳ ದೃಶ್ಯಗಳನ್ನು ಸೆರೆಹಿಡಿಯಲು ಜನರು ಹರ್ ಕಿ ಪೌರಿ ಬಳಿ ಗಂಗಾ ಸೇತುವೆಗಳ ಮೇಲೆ ಜಮಾಯಿಸಿದರು.